ಬುಧವಾರ, ಅಕ್ಟೋಬರ್ 16, 2013


ಬದಲಾದ ಬೈಂದೂರು :


ಎಲ್ಲ ಊರುಗಳ ಹಾಗೆ ನನ್ನೂರು ಬೈಂದೂರು ಸಹ ಬದಲಾಗಿದೆ , ಹುಡುಗರೆಲ್ಲ ಖಾಲಿಯಾಗಿ, ಹುಡುಗಿಯರೆಲ್ಲ ಮದುವೆಯಾಗಿ, ಯುವ ಪೀಳಿಗೆ ಶಾಲಾ ಕಾಲೇಜಿನ ಹಾದಿ ಸವೆಸುತ್ತಾ ಊರುಬಿಡುವ ಯೋಚನೆಯಲ್ಲಿದ್ದಾರೆ . ಇನ್ನು ಕೆಲವರು ಊರು ಬಿಟ್ಟು ಬರಲಾಗದ ಸಂಕಟದಲ್ಲಿ ಕಾಲಹರಣ ಮಾಡುತ್ತ ಕುಳಿತಿದ್ದಾರೆ .
ಬೇಲಿ ಬದಿಯಲ್ಲಿ ಮೇವು ಹೆಕ್ಕುವ ಕೋಳಿಗಳನ್ನು , ಗದ್ದೆ ಬದಿಯಲ್ಲಿ ಗೋಲಿ ,ಚೀನಿ ದಾಂಡು ಆಡುವ ಹುಡುಗರನ್ನು ,ಮನೆಯಂಗಳದಲ್ಲಿ ಕುಂಟೆ ಬಿಲ್ಲೆ ಆಡುವ ಹುಡಿಗಿಯರನ್ನು ನಾವೀಗ ಕಾಣಲಾರೆವು, ಗದ್ದೆ ಅಂಚಿನಲ್ಲಿ ರಗೋಲಿ ಆಡುತ್ತಿದ್ದ ಹುಡುಗರೆಲ್ಲ ಕಂಪ್ಯೂಟರ್ ಮುಂದೆ ಮೌಸ್ ಹಿಡಿದು ಕುಳಿತಿದ್ದಾರೆ . ಸಾರ್ವಜನಿಕ ಗಂಥಾಲಯವನ್ನು ಕೇಳುವವರೇ ಗತಿಯಿಲ್ಲ . ನಾ ಕಲಿತ ಕನ್ನಡ ಶಾಲೆಯಲ್ಲಿ ಬೆರಳೆಣಿಕೆಯ ವಿದ್ಯಾರ್ಥಿಗಳು , ಬಯಲು ಮೈದಾನಗಳಲ್ಲಿ ಆಟೋಟಗಳಿಲ್ಲ. ಬೆಲ್ ಬರ್ಕ ,ಚಪ್ಪರ್ಕ , ಹೆಕ್ಕ ತಿಂಬನೆ , ಎನ್ನುವ ಶಬ್ದಗಳನ್ನು ಈಗ ಹೆಚ್ಚಾಗಿ ಯಾರು ಬಳಸುತ್ತಿಲ್ಲ . ಹೊಸತಾಗಿ ಯಾರೂ ಹೆಂಚಿನ ಮನೆಗಳನ್ನ ಕಟ್ಟುತ್ತಿಲ್ಲ. ಗದ್ದೆಗಳೆಲ್ಲ ಸೈಟುಗಳಾಗಿ, ಮನೆಗಳಾಗಿ, ಮಳಿಗೆಗಳಾಗಿ ಬದಲಾಗಿವೆ , ಇಷ್ಟಾದರೂ ಮೂಲ ಬೈಂದೂರಿಗರಿಗೆ ಊರಲ್ಲೇ ಇದ್ದುಕೊಂಡು ಮಾಡಲು ಸರಿಯಾದ ಕೆಲಸ ಸಿಗುತ್ತಿಲ್ಲ . ದೇವರ ದಯೆಯಿಂದ ಯಾವುದೊ ಒಂದು ಕೆಲಸ ಸಿಕ್ಕಿ ಅಲ್ಲೇ ಕೆಲಸ ಮಾಡಿದರೆ ಅವರಿಗೆ ಅಷ್ಟೇನೂ ಮನ್ನಣೆಯಿಲ್ಲ. ಇಷ್ಟಾದರೂ ಅವರಿವರ ವಿಷಯ ಮಾತನಾಡುತ್ತ , ಇನ್ನೊಬ್ಬರನ್ನು ಮೂದಲಿಸುತ್ತ ( ನಮ್ಮ ಭಾಷೆ ಯಲ್ಲಿ ಹಿಲಾಲ್ ಇಡುತ್ತ ) ಕಾಲ ಕಳೆಯುವ ಜನರ ಸಂಖ್ಯೆಯೇನು ಕಡಿಮೆಯಿಲ್ಲ .
ಈಗಿನ ಕಾಲೇಜು ವಿದ್ಯಾರ್ಥಿಗಳು ಕಾಲೇಜಿಗೆ ನಡೆದು ಹೋಗುವುದು ತುಂಬ ಅಪರೂಪ (ಪ್ರತಿದಿನ ಸರಿಯಾಗಿ ಕಾಲೇಜಿಗೆ ಹೋಗುವುದು ಇನ್ನು ಅಪರೂಪ ಬಿಡಿ ). ೧ ಬಂಗಡೆ ಮೀನಿಗೆ ೫೦ ರೊಪಾಯಿ ಆಗಿದೆಯಂತೆ , ಶುಕ್ರವಾರದ ಸಂತೆಗೂ ಜನ ಸಾಗರವಿಲ್ಲ. ಅದುನಿಕಥೆಯ ಅಬ್ಬರಕ್ಕೆ ನನ್ನೂರು ತುಂಬ ಬದಲಾವಣೆ ಕಂಡರೂ ಸಹ ಅದುನಿಕಥೆಯ ಗಾಳಿ ಓ ಸಿ ಅಂಗಡಿಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.
ಅಭಿವ್ರದ್ದಿಯ ವಿಷಯಕ್ಕೆ ಬಂದರೆ ಮಾತ್ರ ಬದಲಾವಣೆ ಎನ್ನುವುದು ಇಲ್ಲಿ ಎಷ್ಟರ ಮಟ್ಟಿಗೆ ನಡೆದಿದೆ ಎನ್ನುವ ನಗ್ನ ಸತ್ಯವನ್ನು ನಾ ಹೇಳಲಾರೆ ಯಾಕೆಂದರೆ ತಾಲೂಕು ಗೋಷಣೆ ಎಂಬ ಸುದ್ದಿಯನ್ನು ಸೂಮಾರು ೨೦ ವರ್ಷಗಳಿಂದ ಕೇಳುತ್ತಾ ಬಂದಿದ್ದೇವೆ ಆದರು ಸಹ ಇನ್ನು ಅಧಿಕ್ರತ ಗೋಷಣೆ ಆಗಿಲ್ಲ .
ಅದೇನೇ ಇರಲಿ ಐದತ್ತು ವರ್ಷ ಬಿಟ್ಟು ಊರಿಗೆ ಹೋದರೆ ಪರ ಊರಿಗೆ ಹೋದ ಅನುಭವ ಆದರು ಆಗಬಹುದು . ನಿವೇನಂತಿರಾ ಗೆಳೆಯರೇ ?????