ಶನಿವಾರ, ಸೆಪ್ಟೆಂಬರ್ 14, 2013

ಬಿಕೋ ಎನ್ನುತ್ತಿದೆ ಬೈಂದೂರು ಗಾಂಧಿ ಮೈಧಾನ:
ಅದೊಂದು ಕಾಲವಿತ್ತು ಸಂಜೆ ಆಯಿತೆಂದರೆ ಗಾಂಧಿ ಮೈಧಾನದಲ್ಲಿ (ಬಂಗಲೆ ಜಡ್ದ್ ) ಕ್ರೀಡಾ ಪ್ರಿಯರ ದಂಡೆ ಇರುತಿತ್ತು .ಮೈಧಾನದ ಉತ್ತರ ದಿಕ್ಕಿನಲ್ಲಿ ವಿಕ್ರಮ್ ಕ್ಲಬ್ ನವರ ಕ್ರಿಕೆಟ್ ತಾಲೀಮು ,ದಕ್ಷಿಣ ತುದಿಯಲ್ಲಿ ಬ್ಲೂ ಸ್ಟಾರ್ ಕ್ರಿಕೆಟ್ ಕ್ಲಬ್ ನವರ ಕ್ರಿಕೆಟ್ ತಾಲೀಮು ,ಪಶ್ಚಿಮ ಭಾಗದಲ್ಲಿ ಪ್ರಥ್ವಿ ಕ್ರೀಡಾ ಸಂಘ ದವರ ವಾಲಿಬಾಲ್ ತಾಲೀಮು, ಸುತ್ತಲು ಇರುವ ಮರವನ್ನೇ ವಿಕೆಟ್ ಆಗಿಸಿಕೊಂಡು ಕ್ರಿಕೆಟ್ ಆಡುತ್ತಿದ್ದ ಹಾಸ್ಟೆಲ್ ಹುಡುಗರು ,ಇವರುಗಳ ನಡುವೆ ಹೊಸತಾಗಿ ಸೈಕಲ್ ಕಲಿಯುವ ಹುಡುಗರ ದಂಡು. ಸಂಜೆ ೪ ರಿಂದ ೭ ರ ತನಕ ಅಲ್ಲಿ ಕ್ರೀಡಾ ಪ್ರಿಯರ ದಂಡೆ ಇರುತಿತ್ತು .ವರ್ಷಕ್ಕೆ ಕಮ್ಮಿ ಎಂದರು ೩ ರಿಂದ ೪ ಕ್ರಿಕೆಟ್ ಟೂರ್ನಮೆಂಟ್ ,ಕಬಡ್ಡಿ ವಾಲಿಬಾಲ್ ಟೂರ್ನಮೆಂಟ್,ಶಾಲಾ ಕಾಲೇಜುಗಳ ಕ್ರೀಡೋತ್ಸವ ನಿಜವಾಗಲು ಅದು ಗಾಂಧಿ ಮೈಧಾನದ ವೈಭವದ ದಿನಗಳು.
ಕಾಲ ಬದಲಾದಂತೆ ಕೆಲವು ವರ್ಷಗಳಿಂದ ಗಾಂಧಿ ಮೈಧಾನ ಬಿಕೋ ಎನ್ನುತ್ತಿದೆ , ಪ್ರಥ್ವಿ ಕ್ರೀಡಾ ಸಂಘ ದವರ ವಾಲಿಬಾಲ್ ತಾಲೀಮು ಬಿಟ್ಟರೆ ಉಳಿದಂತೆ ಮೈಧಾನ ಖಾಲಿ ಖಾಲಿ   . ಬದಲಾದ ಕಾಲದಲ್ಲಿ ಯುವಕರಲ್ಲಿ ಕ್ರೀಡಾ ಆಸಕ್ತಿ ನಶಿಸಿ ಹೋದಂತೆ ಕಾಣುತ್ತಿದೆ . ಮೊದಲೆಲ್ಲ ಸಂಜೆ ಹೊರಗೆ ಹೋದ ಮಗ ಮನೆಗೆ ಬರುವುದು ತಡವಾದರೆ ತಂದೆ ತಾಯಿಗಳು ನುಕ್ಕಿ ಕೋಲ್ ಹಿಡ್ಕಂಡ್ ಮೈಧಾನಕ್ಕೆ ಬರುವುದು ಸರ್ವೇ ಸಾಮಾನ್ಯವಾಗಿತ್ತು ,ಇಂದು ಹಾಗಲ್ಲ ಮಕ್ಕಳನ್ನು ಹುಡಿಕಂಡ್ ಅಪ್ಪ ಅಮ್ಮ ಬೈಂದೂರಿನ ಸುತ್ತ ಮುತ್ತಲಿನ ಸೈಬರ್ ಕೆಫೆ ಅಲೆಯುವಂತಾಗಿದೆ.
ಏನೇ ಹೇಳಿ ಗಾಂಧಿ ಮೈಧಾನದಲ್ಲಿ ಆಡುತ್ತ ನಮ್ಮ ಸುಂದರ ಬಾಲ್ಯದ ಕ್ಷಣಗಳನ್ನು ಕಳೆದ ನಾವೇ ಧನ್ಯರಲ್ಲವೇ ಗೆಳೆಯರೇ  ,
ಗಾಂಧಿ ಮೈಧಾನ ಆ ವೈಭವದ ದಿನಗಳನ್ನು ಮತ್ತೆ ಕಾಣಲಿ ಎಂದು ಆಶಿಸುತ್ತಾ 
ಇಂತಿ ನಿಮ್ಮವ
ಚರಣ್ ಬೈಂದೂರ್

ಶುಕ್ರವಾರ, ಸೆಪ್ಟೆಂಬರ್ 13, 2013

ಬೈಂದೂರು ನಮ್ಮೂರು :

ಬೈಂದೂರು ನಮ್ಮೂರು :

ಪಡುಗಡಲ ದಡದಲ್ಲಿ ಬೆಳೆದು ನಿಂತಿಹ ಊರು
ತೆಂಗುಗಳ ಮಡಿಲಲ್ಲಿ ಹಸಿರು ಹಾಸಿದ ಸೂರು
ಕಡಲಿನಾರ್ಬಟ ಇಲ್ಲಿ ಸಪ್ತಸ್ವರವಂತೆ
ಎಲ್ಲ ಜಾತಿಯವರು ಇಲ್ಲಿ ಒಂದೇ ಕುಟುಂಬದಂತೆ

ಸೇನೆಶ್ವರ ,ಸೋಮೇಶ್ವರ  ನಮ್ಮನು ಕಾಯುತಿಹನಂತೆ
ನಮ್ಮೆಲ್ಲ ಚಿಂತೆಯ ಹೋಗಲಾಡಿಸುವನಂತೆ
ಈಗರ್ಜಿಯಲಿದೆಯೊಂದು ಸ್ರಷ್ಟಿ ಕರ್ಥನ  ಮನೆ
ಈ ತ್ಯಾಗಮಯಿಯ ಸಂದೇಶ ಪ್ರತಿದಿನವು ನೆನೆ
ಮುಂಜಾನೆ ಮುಸ್ಸಂಜೆ ದರ್ಗಾದ ಪ್ರಾರ್ಥನೆ
ಈ ಊರಲ್ಲಿ ಎಲ್ಲರೂ ಒಂದೇ ಎನ್ನೋ ಭಾವನೆ

ಯಾರೇ  ಬಂದರು ಇಲ್ಲಿ ಸ್ವೀಕರಿಸುವ ಜನ
ಉಂಡು ಬಗೆದರೆ ಇಲ್ಲಿ ಬಿಡುವುದಿಲ್ಲ ನಿನ .
ಸ್ನೇಹಕ್ಕೆ ನೆಲೆಯುಂಟು  ನಂಬಿಕೆಗೆ ಬೆಲೆಯುಂಟು
ಕೂಡಿ ಬಾಳಿದರಿಲ್ಲಿ ಬದುಕಿಗೂ ಅರ್ಥವುಂಟು
ಶುಕ್ರವಾರವಿಲ್ಲಿ ಜನಸಾಗರದ ಸಂತೆ
ದೂರದಿಂದ ಬಂದವರಿಗೆ ಬಸ್ಸಿಗಿಲ್ಲ ಚಿಂತೆ .

ಹಳೆ ಸರ್ಕಾರ ನೀಡಿದೆ ತಾಲೂಕು ಎಂಬ ಘೋಷಣೆ
ಈ ಸರ್ಕಾರವು ನೀಡಲಿ ಅದಕ್ಕೊಂದು ಮನ್ನಣೆ
ಬೇರೆ ಊರಿನ ಜನ ಹೇಳಿ ಹೋಗುವರಂತೆ
ಊರೆಂದರಿರಬೇಕು ಬೈಂದೂರಿನಂತೆ
                          
                             -ಚರಣ್ ಬೈಂದೂರ್

ದೇವಾಡಿಗ

ಯಾರಯ್ಯ ಯಾರಯ್ಯ  ನೀನ್ಯಾರಯ್ಯ

ಗುಡಿಗೋಪುರದಲ್ಲಿ  ಸ್ವರ ಸೂಸುವ ಸ್ವರಗಾರ ನಾನಯ್ಯ
ಮಂದಿರದಿ  ಪಂಚವಾದ್ಯವ  ಮೊಳಗಿಸುವನಾನಯ್ಯ
ದೇವಳ ನಿರ್ವಹಿಸುವ ಸಿದ್ಧಾಂತಿ ನಾನಯ್ಯ
ಹಲವು ದೇವರ ಪೂಜಿಸುವ ವೇದಾಂತಿ ನಾನಯ್ಯ
ದೇವರುತ್ಸವದಿ ಪಂಜನಿಡಿವ ದಾರಿದೀಪವು ನಾನಯ್ಯ
ಘಟ್ಟವನ್ನಾಳಿದ   ಶೇರಿಗಾರ ನಾನಯ್ಯ
ನನ್ನ್ನ ನಾದಕೆ  ತಲೆಯಾಡಿಸದ ನಾಗಧೇವತೆಗಳಿಲ್ಲ
ನನ್ನ ವಾದ್ಯವಿಲ್ಲದೆ ಮಂಗಳ ಕಾರ್ಯ ನಡೆಯೋಲ್ಲ
ಮುಕ್ಕೋಟಿ ದೇವರ ನಾದಸ್ವರ ನಾನಯ್ಯ
ನಾನಯ್ಯ ನಾನಯ್ಯ ದೇವಾಡಿಗ ನಾನಯ್ಯ
                                         - ಚರಣ್ ಬೈಂದೂರ್