ಶನಿವಾರ, ನವೆಂಬರ್ 02, 2013

ಎತ್ತ ಸಾಗುತ್ತಿದೆ ರಾಜ್ಯ ರಾಜಕಾರಣದ ಹಾಗು ರಾಜಕಾರಿಣಿಗಳ ಮನಸ್ಥಿತಿ ????:

ನಾನೊಬ್ಬ ಜಾತ್ಯತೀತ ವಾದಿ ಆದರೆ ಬರೇ ಒಂದು ಕೋಮಿನ ಬಗ್ಗೆ ಮಾತನಾಡುವ ಅವಿವೇಕಿ ಅಲ್ಲ , ಪ್ರಜಪ್ರಬುತ್ವ ಇರುವ ಈ ದೇಶದಲ್ಲಿ ಎಲ್ಲರೂ ಒಂದೇ ಇಲ್ಲಿ ಧರ್ಮ , ಜಾತಿ ಎಂದು ಕಿತ್ತಾಡುವುದರಲ್ಲಿ ಅರ್ಥವಿಲ್ಲ , ಸ್ವತಂತ್ರ ಸಿಕ್ಕಿ ೬೬ ವರ್ಷ ಕಳೆದರು , ಮೀಸಲಾತಿ , ಅಲ್ಪ ಸಂಖ್ಯಾತರು , ಬಹು ಸಂಖ್ಯಾತರು ಎನ್ನುವ ಅರ್ಥವಿಲ್ಲದ ಕೆಲವು ಅಂಶ ಇಟ್ಕೊಂಡು ಕೆಲವು ಮೂರ್ಖ ರಾಜಕಾರಣಿ ಗಳು ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ , ರಾಮಕೃಷ್ಣ ಹೆಗ್ಡೆ ಅಂಥಹ ದೀಮಂಥ ನಾಯಕನ ಗರಡಿಯಲ್ಲಿ ಬೆಳೆದ ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಕೆಲವು ಯೋಜೆನೆಗಳು ಅರ್ಥಹಿನವಾದದ್ದು , ನಮಗೆ ಅವಶ್ಯ ವಿರುವುದು ಶಾದಿ ಭಾಗ್ಯ ಅಲ್ಲ , ಬದಲಾಗಿ ಉದ್ಯೋಗ ಭಾಗ್ಯ . ಅಸಂಖ್ಯಾತ ಪದವಿದರರು ನಿರುದ್ಯೋಗಿಗಳಗಿರುವಾಗ ಅವರ ನಿರುದ್ಯೋಗದ ಸಮಸ್ಯೆ ಭಗೆ ಹರಿಸುವ ಬದಲು , ಶಾದಿ ಭಾಗ್ಯ , ಮಕ್ಕಳ ಭಾಗ್ಯ ಎನ್ನುವ ಯೋಜೆನೆಗಳು ಅಪ್ರಸ್ತುತ . ಯಾರು ಮದುವೇ ಮಾಡಿ ಅಂತ ಜನಪ್ರಥಿನಿದಿಗಳನ್ನು ಆಯ್ಕೆ ಮಾಡೋದಿಲ್ಲ ಬದಲಾಗಿ , ಮೂಲಭೂತ ಸೌಕರ್ಯ , ಉದ್ಯೋಗ ಒದಗಿಸಲಿ ಎನ್ನು ವ ಮಹದಾಸೆ ಯೊಂದಿಗೆ ಓರ್ವ ಜನಪ್ರಥಿನಿದಿಯನ್ನು ಆರಿಸುತ್ತಾರೆ . ನಾನು ಸಹ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡಾಗ ಈತ ಓಳ್ಳೆಯ ಆಡಳಿತ ಗಾರನಾಗಬಹುದು ಎಂದು ತಿಳಿದಿದ್ದೆ ಆದರೆ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎಂಬಂತೆ ಇವರು ಕೂಡ ವೋಟು ಬ್ಯಾಂಕ್ ರಾಜಕಾರಣಕ್ಕೆ ಮೊರೆ ಹೋದಂತಿದೆ , ಜನರಿಗೆ ಅವಶ್ಯವಿರುವುದು ಶಾದಿ ಭಾಗ್ಯದಂಥಹ ಯೋಜೆನೆಗಳಲ್ಲ ಒಂದು ವೇಳೆ ಬಡ ಜನರ ಮದುವೆಗೆ ಸಹಾಯ ಮಾಡಬೇಕು ಅನ್ನುವ ಒಳ್ಳೆ ಯಾ ಅಭಿಲಾಷೆ ಅವರ ಮನಸ್ಸಿನಲ್ಲಿದ್ದರೆ ಆ ಯೋಜೆನೆಯನ್ನು ಎಲ್ಲರಿಗೂ ಅನ್ವಯಿಸುವಂತೆ ಜಾರಿಗೆ ತರಬೇಕು ಬದಲಾಗಿ ಒಂದು ಕೋಮಿನವರನ್ನು ಒಲಿಸಿ ವೋಟು ಬ್ಯಾಂಕ್ ರಾಜಕಾರಣ ಮಾಡುವುದಲ್ಲ . ಬಡವರು ಎಲ್ಲ ಧರ್ಮ ದಲ್ಲೂ ಇದ್ದಾರೆ ವಿನಾಕಾರಣ ಅಲ್ಪ ಸಂಖ್ಯಾತರು , ಬಹು ಸಂಖ್ಯಾತರು ಎನ್ನುವ ವಿಷದ ಬೀಜವನ್ನು ಬಿತ್ತಿ ಮುಗ್ದ ಮನಸ್ಸಿನ್ನ ನಾಗರಿಕರ ಮನಸ್ತಿತಿ ಕೆಡಿಸುವ ಇಂಥಹ ಜನ ನಾಯಕನಿಗೆ ಏನೆನ್ನ ಬೇಕು . ಜನರಿಗೆ ಮೂಲಭೂತ ಸೌಕರ್ಯ ಒದಗಿಸಿ , ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸಿ , ಕನ್ನಡಿಗರಿಗೆ ಮಾತ್ರ ರಾಜ್ಯ ಸರ್ಕಾರೀ ಕೆಲಸ ಎನ್ನುವ ಆದೇಶ ಹೊರಡಿಸಿ , ಕನ್ನಡಿಗರಿಗೆ ಖಾಸಗಿ ಕಂಪನಿ ಗಳಲ್ಲಿ ೭೫ % ಉದ್ಯೋಗ ನಿದಲೇ ಬೇಕೆಂಬ ಕಟ್ಟಾಜ್ಞೆ ಹೊರಡಿಸಿ , ಹಳ್ಳಿ ಹಳ್ಳಿಗು ಕುಡಿಯಿವ ನೀರು ,ವಿದ್ಯುತ್ ಒದಗಿಸಿ , ಬ್ರಷ್ಟಾಚಾರ ನಿರ್ಮೂಲನೆ , ಬಡತನ ನಿರ್ಮೂಲನೆ , ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಇಂಥಹ ಯೋಜನಗಳನ್ನು ಅನುಷ್ಟಾನಕ್ಕೆ ತಂದರೆ ಆ ಯೋಜನೆಗಳು ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿಯಿತ್ತದೆ ಅದನ್ನು ಬಿಟ್ಟು ಶಾದಿ ಭಾಗ್ಯ ದಂಥ ಯೋಜೆನೆಗಳು ಬರೇ ಮದುವೆಯಾಗಿ ವಿಚ್ಚೇದನ ವಾಗುವ ವರೆಗೆ ಮಾತ್ರ ಅಂಥಹ ಯೋಜನೆಗಳು ಯಾರ ಮನಸ್ಸಿನಲ್ಲೂ ದೀರ್ಘ ಕಾಲದ ವರೆಗೂ ಉಳಿಯಲಾಗದು. ತಪ್ಪನ್ನು ತಿದ್ದಿ ನಡೆದರೆ ಮತ್ತೊಮ್ಮೆ ಅದಿಕಾರ ಸಿಕ್ಕರೂ ಸಿಗಬಹುದು ಇಲ್ಲದಿದ್ದಲ್ಲಿ ಮಾಜಿ ಎನ್ನುವ ಪಟ್ಟವೇ ಗಟ್ಟಿ ಏನಂತಿರ ಗೆಳೆಯರೇ ?????

ಗುರುವಾರ, ಅಕ್ಟೋಬರ್ 31, 2013

ಎಂದೂ ಮರೆಯದ ದೀಪಾವಳಿ : ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಎಂಬಂತೆ ಇನ್ನೆರಡು ದಿನದಲ್ಲಿ ಮತ್ತೆ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಸಂಬ್ರಮ . ದೀಪಾವಳಿಯ ಹೆಸರು ಕೇಳಿದೊಡನೆ ಬಾಲ್ಯದ ದೀಪಾವಳಿಯ ದಿನಗಳು ಕಣ್ಣ ಮುಂದೆ ಬಂದು ನಿಂತ ಹಾಗಿರುತ್ತದೆ . ಅದುನಿಕಥೆಯ ಅಬ್ಬರಕ್ಕೆ ಸಿಕ್ಕಿ ಧಾರ್ಮಿಕ ಆಚರಣೆಗಳು ಈಗ ಅಷ್ಟಾಗಿ ಆಚರಣೆಯಲ್ಲಿಲ್ಲದಿದ್ದರು ಕೆಲವು ವರ್ಷಗಳ ಹಿಂದಂತು ನನ್ನೂರು ಬೈಂದೂರಿನಲ್ಲಿ ಬೆಳಕಿನ ಹಬ್ಬದ ಗಮ್ಮತ್ತು ಜೋರಾಗೆ ಇರುತಿತ್ತು . ದೀಪಾವಳಿ ಬಂತೆಂದರೆ ದೂರದ ಊರುಗಳಲ್ಲಿ ನೆಲೆಸಿರುವ ಸಂಬಂದಿಗಳೆಲ್ಲರು ಊರಿಗೆ ಹಾಜರ್ ದೀಪಾವಳಿ ಯಿಂದ ಶುರುವಾಗಿ ತುಳಸಿ ಹಬ್ಬದ ವರೆಗೂ ಪ್ರತಿದಿನ ಮನೆಯಲ್ಲಿ ಹಬ್ಬದ ವಾತಾವರಣವೇ .ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಪಟಾಕಿ ಸಿಡಿಸಿ, ಮನೆ ಸುತ್ತಲು ಮೇಣದ ಬತ್ತಿ ,ದೀಪ ಬೆಳಗಿಸಿ ಹಬ್ಬದ ಸಂಬ್ರಮದಲ್ಲಿ ಭಾಗಿಯಾಗುತ್ತಿದ್ದರು. ದೀಪಾವಳಿಯ ದಿನ ಬೆಳಿಗ್ಗೆ ೫ ಗಂಟೆಗೆ ಎದ್ದು ಎಣ್ಣೆ ಸ್ನಾನ(ಈಗ ಬಿಡಿ ಎಣ್ಣೆ ಸ್ನಾನ ಮಾಡುವವರೇ ಕಡಿಮೆ ಹೊಟ್ಟೆಗೆ ಮಾತ್ರ ಎಣ್ಣೆ ಸ್ನಾನ ಮಾಡ್ಸ್ತಾರೆ ) ಮಾಡಿ ಪಟಾಕಿ ಹೊಡೆಯಲು ಅರಂಬಿಸಿದರೆ ಸಮಯ ಹೋಗಿದ್ದೆ ಗೊತ್ತಾಗುತ್ತಿರಲಿಲ್ಲ , ದೀಪಾವಳಿಗೆಂದೆ ವಿಶೇಷ ವಾಗಿ ತಯಾರಿಸುತ್ತಿದ್ದ ಸಿಹಿ ಕಡಬು ಮತ್ತು ಚಪ್ಪೆ ಕಡಬು ,ತುಳಸಿ ಹಬ್ಬದ ನೆಲ್ಲಿ ಕಾಯಿ ಹುಣಸೆ ಹಣ್ಣು ಇನ್ನು ಬಾಲ್ಯದ ಆ ಹಬ್ಬದ ದಿನಗಳು ನನ್ನ ಮನದಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ , ದೀಪಾವಳಿಯ ಸಮಯದಲ್ಲಿ ವಾರಗಟ್ಟಲೆ ಸದ್ದು ಮಾಡುವ ಗರ್ನಲ್ ,ಆಟಂ ಬಾಂಬ್ , ಲಕ್ಷ್ಮಿ ಪಟಾಕಿ ,ಸರ ಪಟಾಕಿ ಶಬ್ದಕ್ಕೆ ಮನೆಯಲ್ಲಿ ಸಾಕಿದ ನಾಯಿ ವಾರಗಟ್ಟಲೆ ಓಡಿಹೋಗಿದ್ದು ಉಂಟು . ಬಾಲ್ಯದಲ್ಲಿ ಗೆಳೆಯರೊಡನೆ ,ಸೋದರ ಸಂಬಂದಿಗಲೊಡನೆ ಪಟಾಕಿ ಸಿಡಿಸಿ ಹಬ್ಬ ಆಚರಿಸಿದ ಆ ದಿನಗಳನ್ನು ಮರೆಯುವುದುಂಟೆ, ನನ್ನಂತೆ ನಿಮಗೂ ಕೂಡ ಈ ಹಬ್ಬದ ಹೆಸರು ಕೇಳಿದೊಡನೆ ನಿಮ್ಮ ಬಾಲ್ಯದ ದಿನಗಳು ನೆನೆಪಗಬಹುದು ಅಲ್ವಾ ???? ಏನೆ ಹೇಳಿ ಹಿಂದಿನ ವರ್ಷಗಳ ದೀಪಾವಳಿಯ ಗಮ್ಮತ್ತು ಈಗಿಲ್ಲ ಬಿಡಿ ,ಇನ್ನು ಕೆಲವು ವರ್ಷ ಹೋದರೆ ದೀಪಾವಳಿ ಬರೇ ಸರ್ಕಾರೀ ರಜೆಗಷ್ಟೇ ಸಿಮಿತವಾದರೂ ಆಗಬಹುದು .