ಗುರುವಾರ, ಅಕ್ಟೋಬರ್ 31, 2013

ಎಂದೂ ಮರೆಯದ ದೀಪಾವಳಿ : ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ ಎಂಬಂತೆ ಇನ್ನೆರಡು ದಿನದಲ್ಲಿ ಮತ್ತೆ ಬೆಳಕಿನ ಹಬ್ಬ ದೀಪಾವಳಿಯ ಸಡಗರ ಸಂಬ್ರಮ . ದೀಪಾವಳಿಯ ಹೆಸರು ಕೇಳಿದೊಡನೆ ಬಾಲ್ಯದ ದೀಪಾವಳಿಯ ದಿನಗಳು ಕಣ್ಣ ಮುಂದೆ ಬಂದು ನಿಂತ ಹಾಗಿರುತ್ತದೆ . ಅದುನಿಕಥೆಯ ಅಬ್ಬರಕ್ಕೆ ಸಿಕ್ಕಿ ಧಾರ್ಮಿಕ ಆಚರಣೆಗಳು ಈಗ ಅಷ್ಟಾಗಿ ಆಚರಣೆಯಲ್ಲಿಲ್ಲದಿದ್ದರು ಕೆಲವು ವರ್ಷಗಳ ಹಿಂದಂತು ನನ್ನೂರು ಬೈಂದೂರಿನಲ್ಲಿ ಬೆಳಕಿನ ಹಬ್ಬದ ಗಮ್ಮತ್ತು ಜೋರಾಗೆ ಇರುತಿತ್ತು . ದೀಪಾವಳಿ ಬಂತೆಂದರೆ ದೂರದ ಊರುಗಳಲ್ಲಿ ನೆಲೆಸಿರುವ ಸಂಬಂದಿಗಳೆಲ್ಲರು ಊರಿಗೆ ಹಾಜರ್ ದೀಪಾವಳಿ ಯಿಂದ ಶುರುವಾಗಿ ತುಳಸಿ ಹಬ್ಬದ ವರೆಗೂ ಪ್ರತಿದಿನ ಮನೆಯಲ್ಲಿ ಹಬ್ಬದ ವಾತಾವರಣವೇ .ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರು ಸಹ ಪಟಾಕಿ ಸಿಡಿಸಿ, ಮನೆ ಸುತ್ತಲು ಮೇಣದ ಬತ್ತಿ ,ದೀಪ ಬೆಳಗಿಸಿ ಹಬ್ಬದ ಸಂಬ್ರಮದಲ್ಲಿ ಭಾಗಿಯಾಗುತ್ತಿದ್ದರು. ದೀಪಾವಳಿಯ ದಿನ ಬೆಳಿಗ್ಗೆ ೫ ಗಂಟೆಗೆ ಎದ್ದು ಎಣ್ಣೆ ಸ್ನಾನ(ಈಗ ಬಿಡಿ ಎಣ್ಣೆ ಸ್ನಾನ ಮಾಡುವವರೇ ಕಡಿಮೆ ಹೊಟ್ಟೆಗೆ ಮಾತ್ರ ಎಣ್ಣೆ ಸ್ನಾನ ಮಾಡ್ಸ್ತಾರೆ ) ಮಾಡಿ ಪಟಾಕಿ ಹೊಡೆಯಲು ಅರಂಬಿಸಿದರೆ ಸಮಯ ಹೋಗಿದ್ದೆ ಗೊತ್ತಾಗುತ್ತಿರಲಿಲ್ಲ , ದೀಪಾವಳಿಗೆಂದೆ ವಿಶೇಷ ವಾಗಿ ತಯಾರಿಸುತ್ತಿದ್ದ ಸಿಹಿ ಕಡಬು ಮತ್ತು ಚಪ್ಪೆ ಕಡಬು ,ತುಳಸಿ ಹಬ್ಬದ ನೆಲ್ಲಿ ಕಾಯಿ ಹುಣಸೆ ಹಣ್ಣು ಇನ್ನು ಬಾಲ್ಯದ ಆ ಹಬ್ಬದ ದಿನಗಳು ನನ್ನ ಮನದಲ್ಲಿ ಮತ್ತೆ ಮತ್ತೆ ನೆನಪಾಗುತ್ತಿದೆ , ದೀಪಾವಳಿಯ ಸಮಯದಲ್ಲಿ ವಾರಗಟ್ಟಲೆ ಸದ್ದು ಮಾಡುವ ಗರ್ನಲ್ ,ಆಟಂ ಬಾಂಬ್ , ಲಕ್ಷ್ಮಿ ಪಟಾಕಿ ,ಸರ ಪಟಾಕಿ ಶಬ್ದಕ್ಕೆ ಮನೆಯಲ್ಲಿ ಸಾಕಿದ ನಾಯಿ ವಾರಗಟ್ಟಲೆ ಓಡಿಹೋಗಿದ್ದು ಉಂಟು . ಬಾಲ್ಯದಲ್ಲಿ ಗೆಳೆಯರೊಡನೆ ,ಸೋದರ ಸಂಬಂದಿಗಲೊಡನೆ ಪಟಾಕಿ ಸಿಡಿಸಿ ಹಬ್ಬ ಆಚರಿಸಿದ ಆ ದಿನಗಳನ್ನು ಮರೆಯುವುದುಂಟೆ, ನನ್ನಂತೆ ನಿಮಗೂ ಕೂಡ ಈ ಹಬ್ಬದ ಹೆಸರು ಕೇಳಿದೊಡನೆ ನಿಮ್ಮ ಬಾಲ್ಯದ ದಿನಗಳು ನೆನೆಪಗಬಹುದು ಅಲ್ವಾ ???? ಏನೆ ಹೇಳಿ ಹಿಂದಿನ ವರ್ಷಗಳ ದೀಪಾವಳಿಯ ಗಮ್ಮತ್ತು ಈಗಿಲ್ಲ ಬಿಡಿ ,ಇನ್ನು ಕೆಲವು ವರ್ಷ ಹೋದರೆ ದೀಪಾವಳಿ ಬರೇ ಸರ್ಕಾರೀ ರಜೆಗಷ್ಟೇ ಸಿಮಿತವಾದರೂ ಆಗಬಹುದು .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ