ಬಿಕೋ ಎನ್ನುತ್ತಿದೆ ಬೈಂದೂರು ಗಾಂಧಿ ಮೈಧಾನ:
ಅದೊಂದು ಕಾಲವಿತ್ತು ಸಂಜೆ ಆಯಿತೆಂದರೆ ಗಾಂಧಿ ಮೈಧಾನದಲ್ಲಿ (ಬಂಗಲೆ ಜಡ್ದ್ ) ಕ್ರೀಡಾ ಪ್ರಿಯರ ದಂಡೆ ಇರುತಿತ್ತು .ಮೈಧಾನದ ಉತ್ತರ ದಿಕ್ಕಿನಲ್ಲಿ ವಿಕ್ರಮ್ ಕ್ಲಬ್ ನವರ ಕ್ರಿಕೆಟ್ ತಾಲೀಮು ,ದಕ್ಷಿಣ ತುದಿಯಲ್ಲಿ ಬ್ಲೂ ಸ್ಟಾರ್ ಕ್ರಿಕೆಟ್ ಕ್ಲಬ್ ನವರ ಕ್ರಿಕೆಟ್ ತಾಲೀಮು ,ಪಶ್ಚಿಮ ಭಾಗದಲ್ಲಿ ಪ್ರಥ್ವಿ ಕ್ರೀಡಾ ಸಂಘ ದವರ ವಾಲಿಬಾಲ್ ತಾಲೀಮು, ಸುತ್ತಲು ಇರುವ ಮರವನ್ನೇ ವಿಕೆಟ್ ಆಗಿಸಿಕೊಂಡು ಕ್ರಿಕೆಟ್ ಆಡುತ್ತಿದ್ದ ಹಾಸ್ಟೆಲ್ ಹುಡುಗರು ,ಇವರುಗಳ ನಡುವೆ ಹೊಸತಾಗಿ ಸೈಕಲ್ ಕಲಿಯುವ ಹುಡುಗರ ದಂಡು. ಸಂಜೆ ೪ ರಿಂದ ೭ ರ ತನಕ ಅಲ್ಲಿ ಕ್ರೀಡಾ ಪ್ರಿಯರ ದಂಡೆ ಇರುತಿತ್ತು .ವರ್ಷಕ್ಕೆ ಕಮ್ಮಿ ಎಂದರು ೩ ರಿಂದ ೪ ಕ್ರಿಕೆಟ್ ಟೂರ್ನಮೆಂಟ್ ,ಕಬಡ್ಡಿ ವಾಲಿಬಾಲ್ ಟೂರ್ನಮೆಂಟ್,ಶಾಲಾ ಕಾಲೇಜುಗಳ ಕ್ರೀಡೋತ್ಸವ ನಿಜವಾಗಲು ಅದು ಗಾಂಧಿ ಮೈಧಾನದ ವೈಭವದ ದಿನಗಳು.
ಕಾಲ ಬದಲಾದಂತೆ ಕೆಲವು ವರ್ಷಗಳಿಂದ ಗಾಂಧಿ ಮೈಧಾನ ಬಿಕೋ ಎನ್ನುತ್ತಿದೆ , ಪ್ರಥ್ವಿ ಕ್ರೀಡಾ ಸಂಘ ದವರ ವಾಲಿಬಾಲ್ ತಾಲೀಮು ಬಿಟ್ಟರೆ ಉಳಿದಂತೆ ಮೈಧಾನ ಖಾಲಿ ಖಾಲಿ . ಬದಲಾದ ಕಾಲದಲ್ಲಿ ಯುವಕರಲ್ಲಿ ಕ್ರೀಡಾ ಆಸಕ್ತಿ ನಶಿಸಿ ಹೋದಂತೆ ಕಾಣುತ್ತಿದೆ . ಮೊದಲೆಲ್ಲ ಸಂಜೆ ಹೊರಗೆ ಹೋದ ಮಗ ಮನೆಗೆ ಬರುವುದು ತಡವಾದರೆ ತಂದೆ ತಾಯಿಗಳು ನುಕ್ಕಿ ಕೋಲ್ ಹಿಡ್ಕಂಡ್ ಮೈಧಾನಕ್ಕೆ ಬರುವುದು ಸರ್ವೇ ಸಾಮಾನ್ಯವಾಗಿತ್ತು ,ಇಂದು ಹಾಗಲ್ಲ ಮಕ್ಕಳನ್ನು ಹುಡಿಕಂಡ್ ಅಪ್ಪ ಅಮ್ಮ ಬೈಂದೂರಿನ ಸುತ್ತ ಮುತ್ತಲಿನ ಸೈಬರ್ ಕೆಫೆ ಅಲೆಯುವಂತಾಗಿದೆ.
ಏನೇ ಹೇಳಿ ಗಾಂಧಿ ಮೈಧಾನದಲ್ಲಿ ಆಡುತ್ತ ನಮ್ಮ ಸುಂದರ ಬಾಲ್ಯದ ಕ್ಷಣಗಳನ್ನು ಕಳೆದ ನಾವೇ ಧನ್ಯರಲ್ಲವೇ ಗೆಳೆಯರೇ ,
ಗಾಂಧಿ ಮೈಧಾನ ಆ ವೈಭವದ ದಿನಗಳನ್ನು ಮತ್ತೆ ಕಾಣಲಿ ಎಂದು ಆಶಿಸುತ್ತಾ
ಇಂತಿ ನಿಮ್ಮವ
ಚರಣ್ ಬೈಂದೂರ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ