ಶುಕ್ರವಾರ, ಸೆಪ್ಟೆಂಬರ್ 13, 2013

ಬೈಂದೂರು ನಮ್ಮೂರು :

ಬೈಂದೂರು ನಮ್ಮೂರು :

ಪಡುಗಡಲ ದಡದಲ್ಲಿ ಬೆಳೆದು ನಿಂತಿಹ ಊರು
ತೆಂಗುಗಳ ಮಡಿಲಲ್ಲಿ ಹಸಿರು ಹಾಸಿದ ಸೂರು
ಕಡಲಿನಾರ್ಬಟ ಇಲ್ಲಿ ಸಪ್ತಸ್ವರವಂತೆ
ಎಲ್ಲ ಜಾತಿಯವರು ಇಲ್ಲಿ ಒಂದೇ ಕುಟುಂಬದಂತೆ

ಸೇನೆಶ್ವರ ,ಸೋಮೇಶ್ವರ  ನಮ್ಮನು ಕಾಯುತಿಹನಂತೆ
ನಮ್ಮೆಲ್ಲ ಚಿಂತೆಯ ಹೋಗಲಾಡಿಸುವನಂತೆ
ಈಗರ್ಜಿಯಲಿದೆಯೊಂದು ಸ್ರಷ್ಟಿ ಕರ್ಥನ  ಮನೆ
ಈ ತ್ಯಾಗಮಯಿಯ ಸಂದೇಶ ಪ್ರತಿದಿನವು ನೆನೆ
ಮುಂಜಾನೆ ಮುಸ್ಸಂಜೆ ದರ್ಗಾದ ಪ್ರಾರ್ಥನೆ
ಈ ಊರಲ್ಲಿ ಎಲ್ಲರೂ ಒಂದೇ ಎನ್ನೋ ಭಾವನೆ

ಯಾರೇ  ಬಂದರು ಇಲ್ಲಿ ಸ್ವೀಕರಿಸುವ ಜನ
ಉಂಡು ಬಗೆದರೆ ಇಲ್ಲಿ ಬಿಡುವುದಿಲ್ಲ ನಿನ .
ಸ್ನೇಹಕ್ಕೆ ನೆಲೆಯುಂಟು  ನಂಬಿಕೆಗೆ ಬೆಲೆಯುಂಟು
ಕೂಡಿ ಬಾಳಿದರಿಲ್ಲಿ ಬದುಕಿಗೂ ಅರ್ಥವುಂಟು
ಶುಕ್ರವಾರವಿಲ್ಲಿ ಜನಸಾಗರದ ಸಂತೆ
ದೂರದಿಂದ ಬಂದವರಿಗೆ ಬಸ್ಸಿಗಿಲ್ಲ ಚಿಂತೆ .

ಹಳೆ ಸರ್ಕಾರ ನೀಡಿದೆ ತಾಲೂಕು ಎಂಬ ಘೋಷಣೆ
ಈ ಸರ್ಕಾರವು ನೀಡಲಿ ಅದಕ್ಕೊಂದು ಮನ್ನಣೆ
ಬೇರೆ ಊರಿನ ಜನ ಹೇಳಿ ಹೋಗುವರಂತೆ
ಊರೆಂದರಿರಬೇಕು ಬೈಂದೂರಿನಂತೆ
                          
                             -ಚರಣ್ ಬೈಂದೂರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ