ಬುಧವಾರ, ಸೆಪ್ಟೆಂಬರ್ 25, 2013

 ಆ ದಿನಗಳು :

ಸುಮಾರು ಎಂಟತ್ತು ವರ್ಷಗಳ ಹಿಂದೆ ಬೈಂದೂರಿನಲ್ಲಿ ರಥೋತ್ಸವ ಎಂದರೆ ಬಾರಿ ಜನ ಸಾಗರವೇ ಸೇರುತಿತ್ತು. ದೂರದ ಊರಲ್ಲಿರುವ ಬೈಂದೂರಿಗರು ತೇರಿಗೆಂದು ರಜಾ ಪಡೆದು ಊರಿಗೆ ಬರ್ತಿದ್ದ ಕಾಲವದು .
ನಾಡ ಹಬ್ಬ ದಸರಾ ಮೈಸೂರಿನಲ್ಲಿ ಹೇಗೆ ವಿಜ್ರಂಬಣೆಯಿಂದ ನಡೆಯುತಿತ್ತು ಬೈಂದೂರಿನಲ್ಲಿ ರಥೋತ್ಸವ ಅಷ್ಟೇ ವಿಜ್ರಂಬಣೆಯಿಂದ ನಡೆಯುತಿತ್ತು. ಬೈಪಾಸ್ ನಿಂದ ಹಿಡಿದು ಮಾರ್ಕೆಟ್ ನ ಇಕ್ಕೆಲಗಳಲ್ಲಿ ಸಾಲು ಸಾಲು ಅಂಗಡಿಗಳು, ಐಸ್ ಕ್ರೀಂ ವ್ಯಾನ್ ಗಳು . ಸೇನೆಶ್ವರ ದೇವಳದಲ್ಲಿ ದರ್ಶನಕ್ಕೆಂದೇ ಸರದಿ ಸಾಲಲ್ಲಿ ನಿಲ್ಲುತ್ತಿದ್ದ ಭಕ್ತಾದಿಗಳು.
ಮಾರ್ಕೆಟ್ ನ ಒಳಬಾಗದಲ್ಲಿ ಸಾಲು ಸಾಲು ಆಟಿಕೆ, ಸಿಹಿತಿಂಡಿ ,ಬಳೆ ಅಂಗಡಿಗಳು. ಎಡಬಿಡದೆ ತಿರುಗುತಿದ್ದ ತೊಟ್ಟಿಲು ,ಆ ತೊಟ್ಟಿಲೇರಲು ಬೆಳಿಗ್ಗಿನಿಂದಲೇ ಕಾದು ನಿಲ್ಲುದ್ದಿದ್ದ ಪುಟಾಣಿ ಮಕ್ಕಳು ,ಯುವಕರು . ಮರದ ಕುದುರೆ,ಬೈಕ್ ಮುಂತಾದ ಅಕ್ರತಿಯುಳ್ಳ ಬೊಂಬೆಯಾ ಮೇಲೆ ಮಕ್ಕಳನ್ನು ಕೂರಿಸಿ ವ್ರತ್ಥಾಕಾರದಲ್ಲಿ ತಿರುಗುತಿದ್ದ ಆಟಿಕೆ. ಶ್ರೀದರ್ ಬಟ್ಟರ ಮನೆಯ ಸಮೀಪ ಗಗನ ಚುಂಬಿಸಿ ಭೂಮಿಗೆ ಬರುವಂತಿದ್ದ ವಿದ್ಯುತ್ ತೊಟ್ಟಿಲು , ಮಿನಿ ಸರ್ಕಸ್ ,ಗರ ಗರ ಮಂಡಲ , ಸಂಜೆಯ ವೇಳೆ ಶಾರದಾ ವೇದಿಕೆಯಲ್ಲಿ ಲಾವಣ್ಯದ ನಾಟಕ , ರಥ ಎಳೆಯುವ ಸಮಯದಲ್ಲಿ ರಥದ ಎದುರು ಕುಣಿಯುತ್ತಿದ್ದ ತಟ್ಟಿರಾಯ .ರಥದ ಮೇಲಿರುವ ಕಲಶಕ್ಕೆ ಬಾಳೆಹಣ್ಣು ಎಸೆಯದಿದ್ದರು ಒಳಗಡೆ ಕುಳಿತ ಅರ್ಚಕರಿಗೆ ಬಾಳೆಹಣ್ಣು ಎಸೆಯುತಿದ್ದ ಯುವಕರ ಗುಂಪು . ಪ್ರತಿ ವರ್ಷವೂ ತಪ್ಪದೆ ಬರುತ್ತಿದ್ದ ಮಂಟಪ್, ಯೋಯೋ , ಕಿಣಿ ಐಸ್ ಕ್ರೀಂ ಗಳು . ಸಾಲು ಸಾಲು ಕಬ್ಬಿನ ಹಾಲಿನ ಅಂಗಡಿ . ಆ ಒಂದು ದಿನ ಬೈಂದೂರಿನ ಪಾಲಿಗೆ ನಿಜಕ್ಕೂ ಅವಿಸ್ಮರಣಿಯ ದಿನಾವಗಿರುತಿತ್ತು .

ಆದರೆ ಇತ್ತಿಚಿನ ವರ್ಷಗಳಲ್ಲಿ ರಥೋತ್ಸವದ ರಂಗು ಕಡಿಮೆಯಾದಂತೆ ಗೋಚರಿಸುತ್ತಿದೆ.ಸಾಂಪ್ರದಾಯಕ ಆಟದಂತಿದ್ದ ತೊಟ್ಟಿಲು ಮರದ ಕುದುರೆಗಳು ಕೆಲವು ಕಾರಣಗಳಿಂದಾಗಿ ಈಗ ಬೈಂದೂರು ರತ್ಹೊತ್ಸವದಲ್ಲಿ ಕಾಣಸಿಗುವುದಿಲ್ಲ್ಲ.
ರೋಡಿಗೊಂದು ಫ್ಯಾನ್ಸಿ ಸ್ಟೋರ್ ಶುರುವಾಗಿ ಜಾತ್ರೆಯ ಬಳೆಗಳು ,ಆಟಿಕೆಗಳನ್ನುಕೆಳುವವರಿಲ್ಲದಂತಾಗಿದೆ.
ಪೆಪ್ಸಿ ಕೋಲಾ ಗಳಿಗೆ ಮಾರುಹೋಗಿರುವ ಯುವಪೀಳಿಗೆಗೆ ಕಬ್ಬಿನಹಾಲು ಅಷ್ಟಕ್ಕಷ್ಟೇ .
ದೂರದ ಊರಿನಲ್ಲಿರುವವರು ಅವರವರ ಕೆಲಸದ ನಡುವೆ ಊರಿನ ಜಾತ್ರೆಯನ್ನೇ ಮರೆತಂತಿದೆ. ವರ್ಷದಿಂದ ವರ್ಷಕ್ಕೆ ರತ್ಹೊಥ್ಸವಕ್ಕೆ ಬರುತಿದ್ದ ಜನಸಾಗರ ಕ್ಷಿಣಿಸುತ್ತಾ ಸಾಗಿದೆ. ಬಾಲ್ಯದಲ್ಲಿ ಕಂಡ ಆ ಜಾತ್ರೆಯ ಸೊಬಗು ಮತ್ತೆ ನಮಗೆ ಕಾಣ ಸಿಗಲಿ ಎಂಬ ಆಶಯದೊಂದಿಗೆ......
ಇಂತಿ ನಿಮ್ಮವ
ಚರಣ್ ಬೈಂದೂರ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ